ಮುಸ್ಸಂಜೆ ಮುಂಜಾವು
ಒಂದು ಇರುಳು ಒಂದು ಹಗಲು
ಹರಿಯುವುವು ಎಳೆಗಳು
ಎಲ್ಲೊ ಬಿದ್ದ ಗರಿಗಳು
ಆಸೆ ಮೂಡಿ ಕನಸು ತೂರಿ
ಹಗುರ ಹಾರಿ ಬರುವುವು
ಒಂದು ಕಡ್ಡಿ ಒಂದು ಗರಿಕೆ
ಒಂದು ಹುಲ್ಲು ಒಂದು ಕುಣಿಕೆ
ಆಯ್ದು ತಂದು ಕಟ್ಟು ಗೂಡು
ಇಟ್ಟುಬಿಟ್ಟು ತತ್ತಿ ಜೋರು
ಇದ್ದುದಂತೆ ಇರುವುದಿಲ್ಲ
ಯಾವುದೂ ಇದ್ದಂತೆಯೆ
ಚಿಚಿಲಿ ಕುಕಿಲ ಸದ್ದು ಇಲ್ಲ
ಯಾವ ಹಾವೊ ಯಾವ ಬೆಕ್ಕೊ
ಹಗಲು ಇರುಳು ಒಂದೆಯಾನ
ಹಾಯಿಪಟವೆ ಹರಿದ ಗಾನ
ಬೆಳ್ದಿಂಗಳು ಕದ್ದಿಂಗಳು
ಅರಿಯದಾದ ಪಾಕಶಾಲೆ
ಹಗಲಿರುಳೂ ರಾಗವೊಂದೆ?
ಇದನ್ನು ಬರೆದದ್ದು 18-9-2008ರಂದು. ಮನೆ ಬದಲಿಸಿದ ಮೇಲೆ ಬೇಡವಾದ ಕಸದ ನಡುವೆ ಕಳೆದೆರಡು ವಾರದ ಹಿಂದೆ ಸಿಕ್ಕಿದ್ದು. ಈಗ ನಿಮ್ಮ ಮುಂದೆ ಇರಿಸುತ್ತಿದ್ದೇನೆ.
ಒಂದು ಇರುಳು ಒಂದು ಹಗಲು
ಹರಿಯುವುವು ಎಳೆಗಳು
ಎಲ್ಲೊ ಬಿದ್ದ ಗರಿಗಳು
ಆಸೆ ಮೂಡಿ ಕನಸು ತೂರಿ
ಹಗುರ ಹಾರಿ ಬರುವುವು
ಒಂದು ಕಡ್ಡಿ ಒಂದು ಗರಿಕೆ
ಒಂದು ಹುಲ್ಲು ಒಂದು ಕುಣಿಕೆ
ಆಯ್ದು ತಂದು ಕಟ್ಟು ಗೂಡು
ಇಟ್ಟುಬಿಟ್ಟು ತತ್ತಿ ಜೋರು
ಇದ್ದುದಂತೆ ಇರುವುದಿಲ್ಲ
ಯಾವುದೂ ಇದ್ದಂತೆಯೆ
ಚಿಚಿಲಿ ಕುಕಿಲ ಸದ್ದು ಇಲ್ಲ
ಯಾವ ಹಾವೊ ಯಾವ ಬೆಕ್ಕೊ
ಹಗಲು ಇರುಳು ಒಂದೆಯಾನ
ಹಾಯಿಪಟವೆ ಹರಿದ ಗಾನ
ಬೆಳ್ದಿಂಗಳು ಕದ್ದಿಂಗಳು
ಅರಿಯದಾದ ಪಾಕಶಾಲೆ
ಹಗಲಿರುಳೂ ರಾಗವೊಂದೆ?
ಇದನ್ನು ಬರೆದದ್ದು 18-9-2008ರಂದು. ಮನೆ ಬದಲಿಸಿದ ಮೇಲೆ ಬೇಡವಾದ ಕಸದ ನಡುವೆ ಕಳೆದೆರಡು ವಾರದ ಹಿಂದೆ ಸಿಕ್ಕಿದ್ದು. ಈಗ ನಿಮ್ಮ ಮುಂದೆ ಇರಿಸುತ್ತಿದ್ದೇನೆ.