ಮಂಗಳವಾರ, ಅಕ್ಟೋಬರ್ 25, 2011

ಕಣ್ಣು

ಮುಸ್ಸಂಜೆ ಮುಂಜಾವು
ಒಂದು ಇರುಳು ಒಂದು ಹಗಲು

ಹರಿಯುವುವು ಎಳೆಗಳು
ಎಲ್ಲೊ ಬಿದ್ದ ಗರಿಗಳು
ಆಸೆ ಮೂಡಿ ಕನಸು ತೂರಿ
ಹಗುರ ಹಾರಿ ಬರುವುವು
ಒಂದು ಕಡ್ಡಿ ಒಂದು ಗರಿಕೆ
ಒಂದು ಹುಲ್ಲು ಒಂದು ಕುಣಿಕೆ
ಆಯ್ದು ತಂದು ಕಟ್ಟು ಗೂಡು
ಇಟ್ಟುಬಿಟ್ಟು ತತ್ತಿ ಜೋರು
ಇದ್ದುದಂತೆ ಇರುವುದಿಲ್ಲ
ಯಾವುದೂ ಇದ್ದಂತೆಯೆ
ಚಿಚಿಲಿ ಕುಕಿಲ ಸದ್ದು ಇಲ್ಲ
ಯಾವ ಹಾವೊ ಯಾವ ಬೆಕ್ಕೊ
ಹಗಲು ಇರುಳು ಒಂದೆಯಾನ
ಹಾಯಿಪಟವೆ ಹರಿದ ಗಾನ

ಬೆಳ್ದಿಂಗಳು ಕದ್ದಿಂಗಳು
ಅರಿಯದಾದ ಪಾಕಶಾಲೆ
ಹಗಲಿರುಳೂ ರಾಗವೊಂದೆ?

ಇದನ್ನು ಬರೆದದ್ದು 18-9-2008ರಂದು.  ಮನೆ ಬದಲಿಸಿದ ಮೇಲೆ ಬೇಡವಾದ  ಕಸದ ನಡುವೆ ಕಳೆದೆರಡು ವಾರದ ಹಿಂದೆ ಸಿಕ್ಕಿದ್ದು. ಈಗ ನಿಮ್ಮ ಮುಂದೆ ಇರಿಸುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ: