ಕಲಿಸಬಹುದೆ
ಬಲಿತು ಸುತ್ತ
ಕರ ಈಟಿ ಸಿದ್ಧ ನಿಂತ
ಮುಳ್ಳುಕಂಟಿಗಳಿಗೆ
ಸ್ನೇಹವನ್ನ?
ಕಲಿಸದಿರಬಹುದೆ
ಗಾಳಿ ತಗುಲಿದರು ಮುರಕೊಂಡು ಬೇಲಿ
ರಸ ಒಸರುವ
ಕಳ್ಳಿ ಕ್ಯಾಕ್ಟಸ್ ಗಳಿಗೆ
ಮೆದುಮನಸನ್ನ?
ಇದನ್ನು ಬರೆದದ್ದು 02.09.2009ರಲ್ಲಿ. ಆಗ ಇದಕ್ಕೆ ಗೂಢ ಎಂದು ಹೆಸರಿಸಿದ್ದೆ. ನೆನ್ನೆ ಇದನ್ನು ಓದಿದಾಗ ಮಾನವ ಸ್ವಭಾವವನ್ನು ಬದಲಿಸಲು ಸಾಧ್ಯವೆ ಎಂರ್ಬಥದಲ್ಲಿ ಈ ಹೆಸರು ನೀಡಿದೆ. ಈ ಎರಡು ಸಾಲುಗಳು ನಿಮಗೆ ಇಷ್ಟವಾಗಬುದೆಂದು ಭಾವಿಸಿ ನಿಮ್ಮ ಮುಂದಿರಿಸುತ್ತಿದ್ದೇನೆ. ಬೈಗುಳಗಳಿಗೆ ಸದಾ ಸ್ವಾಗತ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ