ಕಳೆದು ಹೋಗಿದೆ
ಮಹತ್ತಿನ ಮಹಲು
ಅವಮಾನದ ಬಯಲು
ಎದುರಾದ ಹಾದಿ
ಮೈಮೇಲೆ ಬಿದ್ದಂತೆ ಆಗಿ
ಪಕ್ಕಕ್ಕೆ ಸರಿದೆ
ಕೈಮುಗಿದು ನಿಂತೆ
ತಲೆ ತಗ್ಗಿ ನಡು ಬಗ್ಗಿ
ಹುದುಗಿಯೂ ಹೋದೆ
ಬಿರುಕು ಬಿಟ್ಟ ನೆಲದೊಳಗೆ
ಈಗ ಇಲ್ಲವಾಗಿದ್ದೇನೆ
ನನ್ನನ್ನು ನಾನು ಕಳಕೊಂಡು
ನೋಡಿದಿರಲ್ಲ ನೀವೆಲ್ಲ!
ನನ್ನ ಹೆಗಲೇರಿದವರು
ತಲೆ ಮೇಲೆ ಕುಳಿತು
ಇಡೀ ಜಗತ್ತಿಗೆ ಕಾಣುವರು
ನಮ್ಮ ಸುತ್ತಲ ನಾಡಿನ ಯಜಮಾನರು
ಯಾರ ಕಣ್ಣಿಗೂ ಬೀಳದು ಅವರ ಭದ್ರ ಬುನಾದಿ
ತೊತ್ತಳ ತುಳಿತಕೆ ತತ್ತರ ನಲುಗಿ
ಅಲುಗಾಡಿ ಬಿಟ್ಟರೆ
ಭೂಮಿಗೆ ನಡುಕ ಉಂಟಾದಂತೆ
ಸುನಾಮಿ ಅಲೆಗಳು ಎದ್ದು ಬಂದಂತೆ
ಒಂದಾಗಿ ಬಿಡುವುವು
ಥರ ಥರ ನಡುಗಿ
ಮಹಲೂ ಮಣ್ಣೂ
ಬೀಸುವ ಗಾಳಿಗೆ ಕಾದು ಕುಳಿತ
ಹಣ್ಣಾದ ಎಲೆಗಳ ಹಾಗೆ
ಎತ್ತರದಲ್ಲೆ ಇದ್ದಾರೆ ಇನ್ನೂ
ಮಹತ್ತಿನ ಮಹಲು
ಅವಮಾನದ ಬಯಲು
ಎದುರಾದ ಹಾದಿ
ಮೈಮೇಲೆ ಬಿದ್ದಂತೆ ಆಗಿ
ಪಕ್ಕಕ್ಕೆ ಸರಿದೆ
ಕೈಮುಗಿದು ನಿಂತೆ
ತಲೆ ತಗ್ಗಿ ನಡು ಬಗ್ಗಿ
ಹುದುಗಿಯೂ ಹೋದೆ
ಬಿರುಕು ಬಿಟ್ಟ ನೆಲದೊಳಗೆ
ಈಗ ಇಲ್ಲವಾಗಿದ್ದೇನೆ
ನನ್ನನ್ನು ನಾನು ಕಳಕೊಂಡು
ನೋಡಿದಿರಲ್ಲ ನೀವೆಲ್ಲ!
ನನ್ನ ಹೆಗಲೇರಿದವರು
ತಲೆ ಮೇಲೆ ಕುಳಿತು
ಇಡೀ ಜಗತ್ತಿಗೆ ಕಾಣುವರು
ನಮ್ಮ ಸುತ್ತಲ ನಾಡಿನ ಯಜಮಾನರು
ಯಾರ ಕಣ್ಣಿಗೂ ಬೀಳದು ಅವರ ಭದ್ರ ಬುನಾದಿ
ತೊತ್ತಳ ತುಳಿತಕೆ ತತ್ತರ ನಲುಗಿ
ಅಲುಗಾಡಿ ಬಿಟ್ಟರೆ
ಭೂಮಿಗೆ ನಡುಕ ಉಂಟಾದಂತೆ
ಸುನಾಮಿ ಅಲೆಗಳು ಎದ್ದು ಬಂದಂತೆ
ಒಂದಾಗಿ ಬಿಡುವುವು
ಥರ ಥರ ನಡುಗಿ
ಮಹಲೂ ಮಣ್ಣೂ
ಬೀಸುವ ಗಾಳಿಗೆ ಕಾದು ಕುಳಿತ
ಹಣ್ಣಾದ ಎಲೆಗಳ ಹಾಗೆ
ಎತ್ತರದಲ್ಲೆ ಇದ್ದಾರೆ ಇನ್ನೂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ