ಭ್ರಷ್ಟಾಚಾರ ವಿರುದ್ಧದ ಹುಸಿ ಚಳವಳಿ ಮುಂದುವರೆದಿದೆ. ಮರಿಗಾಂಧಿಯ ಪೋಸಿನಲ್ಲಿರುವ ಅಣ್ಣಾ ಹಜಾರೆ ಮಾತಿಗೆ ಕೇಂದ್ರದಲ್ಲಿರುವ ಕಾಂಗ್ರೆಸ್ ಮುಂದಾಳತ್ವದ ಯುಪಿಎ ಸರಕಾರ ಗೌರವ ಕೊಡುತ್ತಿರುವಂತೆ ತೋರಿಸಿಕೊಳ್ಳುತ್ತಿದೆ. ಬಾಬಾ ರಾಮದೇವ್ ಬಗೆಗಿನ ಅನುಮಾನಗಳು ಖಚಿತಗೊಳ್ಳುತ್ತಿವೆ.ಕರ್ನಾಟಕದಲ್ಲಿ ಮೂರೂ ರಾಜಕೀಯ ಪಕ್ಷಗಳು ತಾವೆಲ್ಲರೂ ಭ್ರಷ್ಟಾಚಾರ ವಿರೋಧಿಗಳು ಮತ್ತು ತಮಗಿಂತ ಅನ್ಯ ಪಕ್ಷಗಳು ಹೆಚ್ಚು ಭ್ರಷ್ಟರು ಎಂದು ಜನರನ್ನು ಸುಳ್ಳು ಸುಳ್ಳೇ ನಂಬಿಸುವ ಪೈಪೋಟಿಯಲ್ಲಿ ಜಿದ್ದಿಗೆ ಬಿದ್ದಿವೆ. ಈ ನಡುವೆ ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ವಿರೋಧಿ ಚಳವಳಿಯ ಸದಾಶಯಕ್ಕೆ ಮಸಿ ಬಳಿಯಲು ಇಡೀ ಚಳವಳಿಯಲ್ಲಿ ನಂಬಿಕೆಗೆ ಅರ್ಹರಾದ ನ್ಯಾ.ಸಂತೋಷ ಹೆಗಡೆಯವರ ಮೇಲೆ ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ. ಇವೆಲ್ಲ ಪಕ್ಷ ರಾಜಕಾರಣದ ಭಾಗವಾಗಿದೆ.
ಆಧುನಿಕ ಭಾರತದ ರಾಜಕೀಯ ಕ್ಷೇತ್ರದಲ್ಲಿ ಪಕ್ಷ ರಾಜಕಾರಣ ಅಧಿಕಾರ ರಾಜಕಾರಣದ ಅಂಗವಾಗಿ ಒಡಮೂಡಿದೆ. ಭ್ರಷ್ಟತೆ ಇವೆರಡೂ ಅಂಗಗಳ ಮೂಲಾಧಾರವಾಗಿದೆ. ಸ್ವಾತಂತ್ರಪೂರ್ವ ಮತ್ತು ಸ್ವಾತಂತ್ರೋತ್ತರ ರಾಜಕೀಯ ಕ್ಷೇತ್ರವನ್ನು ಸಂಪೂರ್ಣ ಆವರಿಸಿಕೊಂಡಿರುವ ಕಾಂಗ್ರೆಸ್ ತಾನು ಪಾಲಿಸಿಕೊಂಡು ಬಂದಿರುವ ನೀತಿಯನ್ನು ದೇಶದ ಇತರ ಪಕ್ಷಗಳು ಅನಿವಾರ್ಯವಾಗಿ ಅನುಸರಿಸುವಂಥ ದಟ್ಟ ಪ್ರಭಾವ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಪರಂಪರೆಯಲ್ಲಿ ಮೂಡಿದ ಕೆಲವು ಹೆಜ್ಜೆ ಗುರುತುಗಳನ್ನು ಗಮನಿಸಬಹುದು.
ಮೊದಲ ಹೆಜ್ಜೆ?
ರಾಜ್ಯ ವಿಧಾನಸಭೆಯ ಕೆಳಮನೆ, ಮೇಲ್ ಮನೆ ಮತ್ತದರ ಸದಸ್ಯ ಸಂಖ್ಯೆಯನ್ನು ನಿರ್ಣಯಿಸುವಾಗ ನೆಹರೂ ಅವರಿಗೆ ದೇಶದ ಸ್ವಾತಂತ್ರಕ್ಕೆ ಕಷ್ಟಪಟ್ಟ ಹೋರಾಟಗಾರರಿಗೆ ಅಧಿಕಾರದ ಸ್ಥಾನಗಳಲ್ಲಿ ಅನುಕೂಲವಾಗಿರಬೇಕೆಂಬ ಒಳಉದ್ದೇಶವಿತ್ತು; ಅದಕ್ಕಾಗಿ ಹೆಚ್ಚು ಸದಸ್ಯ ಸಂಖ್ಯಾಬಲವುಳ್ಳ ವಿಧಾನ ಮಂಡಲವನ್ನು ರಚಿಸಿದರು ಎಂದು ಹಿರಿಯರು ಹೇಳುತ್ತಿದ್ದರು. ಈ ಮಾತು ಐತಿಹಾತಿಸಿಕ ಅಂಶಗಳಿಂದ ಕೂಡಿದ್ದಲ್ಲಿ ಪಕ್ಷ ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ ಸರಿಯಾದ ಕ್ರಮವಾಗಿ ಅಂದಿಗೆ ಕಂಡಿರಬಹುದು. ಆಡಳಿತರೂಢ ಪಕ್ಷದ ನಾಯಕರಾಗಿ ನೆಹರೂ ತಮ್ಮ ಪಕ್ಷ ಮತ್ತು ಸರಕಾರದ ಬೇರುಗಳನ್ನು ಭದ್ರ ಪಡಿಸಿಕೊಂಡಿದ್ದಾರೆ. ಇದು ಅಧಿಕಾರದಲ್ಲಿರುವ ಪಕ್ಷ ತಾನು ಮುಂದೆ ಯಾವುದೇ ಸಂದರ್ಭದಲ್ಲೂ ಅಧಿಕಾರದಲ್ಲಿ ಮುಂದುವರೆಯಲು ತಕ್ಕ ವೇದಿಕೆ ನಿರ್ಮಿಸಿಕೊಂಡ ಕ್ರಮ. ಹಾಗಾಗಿ ಪ್ರಜಾಪ್ರಭುತ್ವದ ಮೂಲ ಶಕ್ತಿಯಾದ ಜನತೆಯ ಅಭಿಪ್ರಾಯ ಮತ್ತು ಹಿತಾಸಕ್ತಿಯನ್ನು ಹಿಂದಿಕ್ಕಲು ಅನುಸರಿಸಿದ ಮೊದಲ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡ ಸ್ವತಂತ್ರ ಭಾರತದ ಮೊದಲ ಘಟ್ಟದಲ್ಲೆ ನಡೆದುಹೋದ ಪ್ರಜಾಪ್ರಭುತ್ರ ವಿರೋಧಿ ನಡೆಯೂ ಆಗಿದೆ.
ಸಮಾಜಶಾಸ್ತ್ರದಲ್ಲಿ ಜಾತಿ ಮತ್ತು ರಾಜಕಾರಣ ಕುರಿತ ನಿರೂಪಣೆ
ನನ್ನ ಬಿಎ ತರಗತಿಯಲ್ಲಿ ಸಮಾಜಶಾಸ್ತ್ರ ಪಠ್ಯಕ್ರಮ ಅಧ್ಯಯನ ಮಾಡುವಾಗ ಮತ್ತಷ್ಟು ಸಂಗತಿಗಳು ತಿಳಿದುಬಂದವು.. ಆಂಧ್ರಪ್ರದೇಶದಲ್ಲಿ ಮೊದಲಿಗೆ ಸಿಪಿಐ ಸರಕಾರವಿತ್ತು. ನಂತರ ಅಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಾಟೀಲ ಎಂಬುವರಿಗೆ ಚುನಾವಣಾ ಉಸ್ತುವಾರಿ ವಹಿಸಿತು. ಅವರು ಆಂಧ್ರದ ಚುನಾವಣಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯಾ ಕ್ಷೇತ್ರದ ಪ್ರಬಲ ಜಾತಿ ಸಮುದಾಯದಿಂದ ಆರಿಸಿದರು. ಹೀಗೆ ಮೊದಲ ಬಾರಿಗೆ ಕಾಂಗ್ರೆಸ್ ಚುನಾವಣೆಯನ್ನು ಜಾತಿ ಆಧಾರದ ಮೇಲೆ ಎದುರಿಸಿತು. ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಡೆಸಿದ ಈ ಪ್ರಯೋಗದಲ್ಲಿ ಅದ್ಭುತ ಫಲಿತಾಂಶವನ್ನೆ ಪಡೆಯಿತು.ಆಂಧ್ರಪ್ರದೇಶದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯಿತು..
ಮತದಾರರ ಮಗ್ಧತೆಯನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್, ಜಾತಿ ಅಭಿಮಾನವನ್ನು ತನ್ನ ಪಕ್ಷದ ಮತಗಳನ್ನಾಗಿ ಪರಿವರ್ತನೆ ಮಾಡಿಕೊಂಡಿತು. ಜಾತಿಯನ್ನು ಮೊದಲ ಬಾರಿಗೆ ಚುನಾವಣಾ ರಾಜಕೀಯದಲ್ಲಿ ಬಳಸಿ ಮತದಾರರ ಮನಸ್ಸನ್ನು ಭ್ರಷ್ಟಗೊಳಿಸಿತು. ಜಾತಿ ಆಧಾರಿತ ರಾಜಕಾರಣವನ್ನು ಆರಂಭಿಸಿ ಸಾಮಾಜಿಕ ಶ್ರೇಣೀಕರಣದ ಬೇರುಗಳನ್ನು ಮತ್ತಷ್ಟು ಭದ್ರಪಡಿಸಿತು. ಮಾತ್ರವಲ್ಲ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ನಡುವಿದ್ದ ಅಂತರವನ್ನು ಅಳಿಸಿಹಾಕಿತು. ಸಾಮಾಜಿಕ ಜೀವನವನ್ನು ಮತ್ತಷ್ಟು ಜಟಿಲಗೊಳಿಸಿದ ಈ ರಾಜಕೀಯ ನಡೆ, ಅಂತಿಮವಾಗಿ ಚುನಾವಣೆಯಲ್ಲಿ ಅನ್ಯ ಪಕ್ಷಗಳ ಮೇಲೆ ಕಾಂಗ್ರೆಸ್ ಮೇಲುಗೈ ಸಾಧಿಸಲು ನೆರವಾಯಿತು.
ಮತ್ತೆ ಮತ್ತೆ ಕಿವಿಗೆ ಬಿದ್ದ ಕೇರಳದ ನಿದರ್ಶನ
ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಯಾಗಿದ್ದ ಇಂದಿರಾಗಾಂಧಿ ತಮ್ಮ ಬೇಡಿಕೆಯನ್ನು ಅಂದಿನ ಪ್ರಧಾನಿ ನೆಹರೂ ಮುಂದಿಟ್ಟರು. ರಾಜಕೀಯ ಸಾಮರ್ಥ್ಯವನ್ನು ಸಾಬೀತು ಪಡಿಸದೆ ಪಕ್ಷದ ಕಾರ್ಯದರ್ಶಿ ಹುದ್ದೆ ಪಡೆಯಲು ಸಾಧ್ಯವಿಲ್ಲವೆಂದು ನೆಹರೂ ತಿಳಿಸಿದರು. ಆಗ ಕೇರಳದಲ್ಲಿ ಇ ಎಂ ಎಸ್ ನಂಬೂದರಿಪಾಡ್ ನೇತೃತ್ವದ ಕಾಂಗ್ರೆಸ್ಸೇತರ ಸರಕಾರ ಆಡಳಿತದಲ್ಲಿತ್ತು. ಅಲ್ಲಿನ ಸಿಪಿಎಂ ಸರಕಾರವನ್ನು ಉರುಳಿಸಿ ಕಾಂಗ್ರೆಸ್ ಸರಕಾರ ಸ್ಥಾಪಿಸಿದಲ್ಲಿ ಇಂದಿರಾಗಾಂಧಿಗೆ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಹುದ್ದೆ ನೀಡುವ ಭರವಸೆ ನೀಡಿದರು.
ಇದಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿ ಕೇರಳಕ್ಕೆ ಭೇಟಿ ನೀಡಿದರು. ಅವರು ಮರಳಿ ದೆಹಲಿ ತಲುಪುವ ವೇಳೆಗೆ ಕೇರಳದ ಆಡಳಿತರೂಢ ಸಿಪಿಎಂ ಪಕ್ಷದ ಕೆಲವು ಎಂ ಎಲ್ ಎ ಗಳು ಸರಕಾರದ ವಿರುದ್ಧ ಬಂಡೆದ್ದು ಪಕ್ಷಕ್ಕೆ ರಾಜಿನಾಮೆ ನೀಡಿದರು ಮತ್ತು ಇದರಿಂದ ಬಹುಮತ ಕಳೆದುಕೊಂಡ ಇ ಎಂ ಎಸ್ ಸರಕಾರ ಅಧಿಕಾರದಿಂದ ಕೆಳಗಿಳಿಯಿತು. ಬಂಡೆದ್ದ ಶಾಸಕರ ಬೆಂಬಲದಿಂದ ಕಾಂಗ್ರೆಸ್ ಸರಕಾರ ಕೇರಳದಲ್ಲಿ ಅಧಿಕಾರಕ್ಕೆ ಏರಿತು.ಭಾರತೀಯ ರಾಜಕಾರಣದಲ್ಲಿ ಪಕ್ಷಾಂತರ ರಾಜಕೀಯದ ಹಾವಳಿ ಮೊದಲಿಟ್ಟಿತು.
ಇಂದಿರಾಗಾಂಧಿ ತಿರುವನಂತಪುರಕ್ಕೆ ಭೇಟಿ ನೀಡಿದ್ದ ಈ ಸಮಯದಲ್ಲಿ ಸರಕಾರ ಬಹುಮತ ಕಳೆದುಕೊಳ್ಳಲು ಮತ್ತು ಕಾಂಗ್ರೆಸ್ ಸರಕಾರ ರಚಿಸಲು ಅಗತ್ಯವಾದ ಸಿಪಿಎಂ ಪಕ್ಷದ ಶಾಸಕರ ಕುದುರೆ ವ್ಯಾಪಾರ ನಡೆದದ್ದು ನಂತರ ಗುಟ್ಟಾಗಿ ಉಳಿಯಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಭುವಾದ ಮತದಾರರು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳಿಗೆ ಅಧಿಕಾರ ನೀಡಿದರೂ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಜನತೆ ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಅನ್ಯ ಪಕ್ಷಗಳನ್ನು ಅಧಿಕಾರಕ್ಕೆ ತರುವಂತಿಲ್ಲ ಎಂಬ ಅಲಿಖಿತ ನಿಯಮವನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿತು. ಕಾಂಗ್ರೆಸ್ಸಿನ ಈ ನೀತಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಶಿಸ್ತು, ಸಂಯಮ, ಪಕ್ಷನೀತಿ ಬದ್ಧತೆ ಮರೆಯಾಗಲು ಮತ್ತು ಅಧಿಕಾರ ದಾಹ, ಭ್ರಷ್ಟತೆ ತುಂಬಿ ಅನೈತಿಕತೆ ಮೆರೆಯಲು ಕಾರಣವಾಯಿತು.
ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ನಾಶ
1969ರಲ್ಲಿ ನಡೆದ ರಾಷ್ರಪತಿಗಳ ಹುದ್ದೆಗೆ ನಡೆದ ಚುನಾವಣೆಗೆ ಕಾಂಗ್ರೆಸ್ ನೀಲಂ ಸಂಜೀವರೆಡ್ಡಿಯವನ್ನು ಅಭ್ಯರ್ಥಿಯನ್ನಾಗಿ ಆರಿಸಿತು. ಈ ವಿಷಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿ ನಾಯಕರ ನಡುವೆ ಸಹಮತ ಏರ್ಪಡಲಿಲ್ಲ. ಆಗ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ತನ್ನ ಪಕ್ಷದ ಅರ್ಭ್ಯಥಿಯ ವಿರುದ್ಧ "ಆತ್ಮ ಸಾಕ್ಷಿ" ಮತ ಚಲಾಯಿಸುವಂತೆ ಕರೆ ನೀಡಿದ ಪ್ರಧಾನಿ ಪಕ್ಷೇತರ ಅಭ್ಯರ್ಥಿ ವಿ ವಿ ಗಿರಿ ಅವರನ್ನು ಗೆಲ್ಲಿಸಿದರು ಮತ್ತು ಪಕ್ಷದ ಸಾಮೂಹಿಕ ನಾಯಕತ್ವ ಕಲ್ಪನೆಗೆ ದೊಡ್ಡ ಪೆಟ್ಟು ನೀಡಿದರು. ಇದರಿಂದ ಪಕ್ಷದ ಹುದ್ದೆಗಳು ಮತ್ತು ಆ ಹುದ್ದೆಯಲ್ಲಿದ್ದ ಪದಾಧಿಕಾರಿಗಳು ತಮ್ಮ ಘನತೆಯನ್ನು ಕಳೆದುಕೊಂಡರು.
ಕಾಂಗ್ರೆಸ್ ಪಕ್ಷದ ಆಡಳಿತ ರೂಢ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ತಮ್ಮ ಅಧಿಕಾರವೆ ಹೆಚ್ಚಿನದೆಂದು ಹಗ್ಗ ಜಗ್ಗಾಟ ನಡೆಸಿದ ಪರಿಣಾಮವಾಗಿ ಪಕ್ಷ ಎರಡು ಹೋಳಾಯಿತು. ಅಂದಿನಿಂದ ಪಕ್ಷದಲ್ಲಿ ಅಡ್ ಹಾಕ್ ಸಮಿತಿಗಳನ್ನು ನೇಮಕ ಮಾಡುವ ಚಾಳಿ ಆರಂಭವಾಯಿತು. ಕಾಂಗ್ರಸ್ ಪಕ್ಷ ಆಡಳಿತ ರೂಢ ನಾಯಕರ ಕೈಗೊಂಬೆಯಾಯಿತು. ಪಕ್ಷದ ವರಿಷ್ಟ ಮಂಡಳಿ (ಹೈಕಮಾಂಡ್) ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮಿತಿಯಿಂದ ಆಡಳಿರೂಢ ನಾಯಕರು ಮತ್ತು ಅವರಿಂದ ನೇಮಿತರಾದ ನಿಷ್ಟ ಪದಾಧಿಕಾರಿಗಳ ಸಮಿತಿಗೆ ವರ್ಗಾವಣೆಯಾಯಿತು.ಅಂತಿಮವಾಗಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವ ನಾಶವಾಯಿತು. ಈಗ ಬಹುಪಾಲು ಎಲ್ಲ ರಾಜಕೀಯ ಪಕ್ಷಗಳಲ್ಲೂ ಆಂತರಿಕ ಪ್ರಜಾಪ್ರಭುತ್ವ ನೆಪ ಮಾತ್ರವಾಗಷ್ಟೆ ಉಳಿದಿದೆ.
ಮೇರೆ ಮೀರಿದ ಭ್ರಷ್ಟಾಚಾರ
ಕಾಂಗ್ರೆಸ್ ಪಕ್ಷದ ವಿಭಜನೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರಸ್ ನ ಎರಡೂ ಪಕ್ಷಗಳು ತಾವು ಅನುಸರಿಸಿದ ರಾಜಕೀಯ ನೀತಿ ನಿಲುವುಗಳಿಗೆ ಮತದಾರನ ಅಂಗೀಕಾರ ಪಡೆಯಲು ಹೋರಾಡಿದವು. ಮತದಾರನಿಗೆ ದೇಶದ ರಾಜಕಾರಣದ ದಿಕ್ಕು ದೆಸೆಯಾಗಲೀ ಪ್ರಜಾಪ್ರಭುತ್ವದ ತಾತ್ವಿಕ ನೆಲೆಗಟ್ಟಾಗಲೀ ತಿಳಿದಿರಲಿಲ್ಲ. ಇದಕ್ಕೆ ಪ್ರಮುಖ ಕಾರಣಗಳನ್ನು ಹೀಗೆ ಗುರುತಿಸಬಹುದು. 1.ಪ್ರಜಾಪ್ರಭುತ್ವ ವ್ಯವಸ್ಥೆಯೇ ಜನತೆ ಪ್ರಜ್ಞಾಪೂರ್ವಕವಾಗಿ ಆರಿಸಿಕೊಂಡ ವ್ಯವಸ್ಥೆಯಾಗಿರಲಿಲ್ಲ. 2. ಬಹು ಸಂಖ್ಯಾತ ಮತದಾರರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಧೀನ ಸ್ಥಿತಿಯಲ್ಲಿದ್ದು ಸ್ವಾತಂತ್ರ್ದದ ಕಲ್ಪನೆ ಮತ್ತು ಅದರ ಅನುಭವದಿಂದ ಹೊರಗುಳಿದು ಬಿಟ್ಟಿದ್ದರು.
ಚುನಾವಣೆಗಳಲ್ಲಿ ಜಾತಿ ರಾಜಕಾರಣದ ಮೂಲಕ ವಿರೋಧ ಪಕ್ಷಗಳನ್ನು ಮಣಿಸಿದ್ದ ದೊಡ್ಡ ಅನುಭವ ಕಾಂಗ್ರೆಸ್ ಪಕ್ಷದ ಎರಡೂ ಬಣಗಳಲ್ಲಿತ್ತು. ಆದರೆ ಹಣ ಮತ್ತು ಅಧಿಕಾರದ ಅಧಿಕ ಬಲ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿತ್ತು. ಮತದಾರರನ ಹೀನಸ್ಥಿತಿಯನ್ನು ತನ್ನ ಬಂಡವಾಳವನ್ನಾಗಿ ಮಾಡಿಕೊಂಡು ಚುನಾವವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ ಆಡಳಿತ ಕಾಂಗ್ರೆಸ್ ನ ಮೂಲ ಶಕ್ತಿಯೆ ಅಧಿಕಾರ ಮತ್ತು ಪಕ್ಷ ರಾಜಕಾರಣವಾಗಿತ್ತು. ಇದರ ಫಲವಾಗಿ ಚುನಾವಣೆ ಗೆಲ್ಲುವ ತಂತ್ರೋಪಾಯವಾಗಿ ಚುನಾವಣೆಯ ಹಿಂದಿನ ರಾತ್ರಿ ಹಣ, ಸೀರೆ, ಹೆಂಡ ಹಂಚಿ, ಗ್ರಾಮದೈವಗಳ ಸಮಕ್ಷಮ ಪ್ರಮಾಣ ಮಾಡಿಸಿಕೊಳ್ಳುವ ಹೊಸಪರಿಯೊಂದು ಬೆಳವಣಿಗೆಯಾಯಿತು.ಇವು ಮುಗ್ಧ ಮತದಾರನ ನೈತಿಕತೆ ಪ್ರಜ್ಞೆಯನ್ನು ಭ್ರಷ್ಟಗೊಳಿಸಿತು ಮತ್ತು ಮತ ಖರೀದಿಯ ಪರಂಪರೆಯನ್ನು ಹುಟ್ಟುಹಾಕಿತು. ಅಲ್ಲದೆ ಪಕ್ಷ ನಿಷ್ಟ ಚುನಾವಣಾ ಅಧಿಕಾರಿಗಳ ನೆರವಿನಿಂದ ಮತಗಟ್ಟೆಯಲ್ಲಿ ಆಡಳಿತ ರೂಢ ಪಕ್ಷದ ಪರವಾಗಿ ಸಾರಾಸಗಟಾಗಿ ಅಕ್ರಮ ಮತ ಚಲಾವಣೆ ಎಸಗಿ ಓಟು ಲೂಟಿ ಮಾಡುವುದೂ ಮೊದಲಾಯಿತು. ಪಕ್ಷ ಮತ್ತು ಅಧಿಕಾರ ರಾಜಕಾರಣದ ಈ ಚುನಾವಣಾ ತಂತ್ರೋಪಾಪಾಯಗಳ ಪ್ರಯೋಗದಿಂದಲೇ ಇಂದಿಗೂ ಎಲ್ಲ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಚುನಾವಣಾ ಆಯುಕ್ತರಾಗಿದ್ದ ಶೇಷನ್ ಅವರು ಚುನಾವಣಾ ಅಕ್ರಮಗಳ ವಿರುದ್ಧ ಎಬ್ಬಿಸಿದ ಅಲೆ ಈಗ ಪರಿಣಾಮ ಶೂನ್ಯವಾಗಿದೆ.
1971ರ ಚುನಾವಣೆಯಲ್ಲಿ ಹೀಗೆ ಆಡಳಿತ ಕಾಂಗ್ರೆಸ್ ಜಯಭೇರಿ ಹೊಡೆದು ಪ್ರಜಾಪ್ರಭುತ್ವದ ಎಲ್ಲ ತತ್ವ ಚೌಕಟ್ಟುಗಳನ್ನು ಬಲಹೀನಗೊಳಿಸಿತು. ಆ ನಂತರದ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭಾರತ ಭ್ರಷ್ಟಾಚಾರ ದೇಶಗಳ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯಿತು. ಅದೇ ಕಾಲಕ್ಕೆ ಭ್ರಷ್ಟಾಚಾರ ತೊಡೆದು ಹಾಕುವುದು ಸುಲಭದ ಮಾತಲ್ಲ ಎಂಬ ಅರ್ಥದಲ್ಲಿ ಇಂದಿರಾಗಾಂಧಿಯವರೂ ಹೇಳಿಕೆ ನೀಡಿದರು. 1975ರ ಚುನಾವಣೆಯಲ್ಲಿ ಸ್ವತಃ ಇಂದಿರಾಗಾಂಧಿಯೇ ಅಕ್ರಮ ನಡೆಸಿದ್ದನ್ನು 1977ರಲ್ಲಿ ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದು ಅವರ ಆಯ್ಕೆಯನ್ನು ರದ್ದುಗೊಳಿಸಿತು. ಇದು ದೇಶದಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಹೇರಲು ಕಾರಣವಾಯಿತು.
ನಂತರ ಜನತಾ ಸರಕಾರದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್ ಪಕ್ಷ ಜನತಾ ಪಕ್ಷದ ನಾಯಕರ ರಾಜಕೀಯ ದೌರ್ಬಲ್ಯಗಳನ್ನೆ ಬಂಡವಾಳವಾಗಿಸಿಕೊಂಡು ಸರಕಾರದಲ್ಲಿ ಭಿನ್ನಾಭಿಪ್ರಾಯ ಬಿತ್ತಿ ಸರಕಾರ ಉರುಳಿಸಿತು. ಜನತೆಯ ಕಣ್ಣಲ್ಲಿ ವಿರೋಧ ಪಕ್ಷಗಳು ಆಡಳಿತ ನಡೆಸಲು ಅರ್ಹರಲ್ಲವೆಂದು ಬಿಂಬಿಸಿತು. ಕಾಂಗ್ರೆಸ್ ಪಕ್ದದ ವಿರುದ್ಧ ನೀಡಿದ್ದ ಜನತೆಯ ತೀರ್ಪನ್ನು ಅದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ ಮತ್ತು ತನ್ನ ನಿರ್ಣಯವನ್ನು ಜನತೆ ಒಪ್ಪಿಕೊಳ್ಳಬೇಕು ಎಂಬು ನಿಲುವನ್ನು ಹೊಂದಿತ್ತು. ಇದು ಭಾರತದಲ್ಲಿ ನೆಲೆಗೊಂಡ ಪ್ರಜಾಪ್ರಭುತ್ವದ ಮಾದರಿಯಾಗಿದೆ. ನಂತರದ ಕಾಲದಲ್ಲಿ ಕಾಂಗ್ರೆಸ್ ನಾಯಕರು ಸ್ವಿಸ್ ಬ್ಯಾಂಕುಗಳಲ್ಲಿ ಹೇರಳ ಪ್ರಮಾಣದಲ್ಲಿ ಕಪ್ಪು ಹಣವನ್ನು ಗುಪ್ತವಾಗಿಟ್ಟಿದ್ದ ಸುದ್ದಿಗಳು ಹೊರಬರತೊಡಗಿದವು.
ಕೇಂದ್ರದಲ್ಲಿ ಜನತೆ ಅಧಿಕಾರಕ್ಕೆ ತಂದ ಜನತಾ ಸರಕಾರವನ್ನು ಅಸ್ಥಿರಗೊಳಿಸಲು ಅಂದು ವಿರೋಧ ಪಕ್ಷದಲ್ಲಿದ್ದ ಇಂದಿರಾಗಾಂಧಿಯವರು ಪಂಜಾಬ್ ಮತ್ತು ಅಸ್ಸಾಂನಲ್ಲಿ ಪ್ರತ್ಯೇಕತಾವಾದಿ ಚಳವಳಗಳಿಗೆ ಪ್ರೋತ್ಸಾಹ ನೀಡಿದರು. ಮುಂದಿನ ದಿನಗಳಲ್ಲಿ ಅಸ್ಸಾಂನ ಚಳವಳಿಗಾರರು ಎಜಿಪಿ ಪಕ್ಷ ಕಟ್ಟಿಕೊಂಡು ರಾಜ್ಯ ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ ಪಂಜಾಬಿನಲ್ಲಿ ಉಗ್ರವಾದಿಗಳನ್ನು ಮಣಿಸಲು ಸ್ವರ್ಣಮಂದಿರಕ್ಕೆ ಸೇನೆ ನುಗ್ಗಿಸಿದ ಇಂದಿರಾಗಾಂಧಿ, ಪಕ್ಷ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣದ ಹಿನ್ನೆಲೆಯಿಂದ ಕೈಗೊಂಡ ನಿಷ್ಟೂರ ನಿರ್ಣಯಗಳ ಫಲವಾಗಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಯಿತು.
ರಾಜೀವಗಾಂಧಿ ಅಧಿಕಾರದ ಅವಧಿಯಲ್ಲಿ ಬೋಫರ್ಸ್ ಹಗರಣ, ಪಿವಿನರಸಿಂಹರಾವ್ ಕಾಲದಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ಕಾಂಗ್ರೆಸ್ ತನ್ನ ಹಾದಿಯಲ್ಲೆ ಹೆಜ್ಜೆ ಇಟ್ಟಿರುವ ನಿದರ್ಶನಗಳಾಗಿವೆ. ಬಿಜೆಪಿಯ ಹಿಡನ್ ಅಜೆಂಡಾ ರೀತಿಯಲ್ಲಿ ಕಾಂಗ್ರೆಸ್ ದೇಶದ ಒಳಿತಿಗಿಂತ ತನ್ನ ಪಕ್ಷದ ಒಳಿತನ್ನು ಒಳ ಉದ್ದೇಶವಾಗಿ ಹೊಂದಿದೆ. ಕಾಂಗ್ರೆಸ್ ಪಕ್ಷ ಭಾರತದಲ್ಲಿ ನೆಲೆಯೂರಿರುವ ಪಕ್ಷ ರಾಜಕಾರಣ ಮತ್ತು ಅಧಿಕಾರ ರಾಜಕಾರಣದ ತಾಯಿ ಬೇರಾಗಿದೆ. ಕಾಂಗ್ರೆಸ್ ಹುಟ್ಟುಹಾಕಿರುವ ಪರಂಪರೆಯಲ್ಲಿ ಬಾರತದ ಬಹುಪಾಲು ರಾಜಕೀಯ ಪಕ್ಷಗಳು ತಮ್ಮ ಹಾದಿಯನ್ನು ಕ್ರಮಿಸಿವೆ. ಹಾಗಾಗಿ ದೇಶದ ಎಲ್ಲ ರಾಜಕೀಯ ಪಕ್ಷಗಳು ಪಕ್ಷ ಮತ್ತು ಅಧಿಕಾರ ರಾಜಕಾರಣವನ್ನು ತಮ್ಮ ಅಸ್ತಿತ್ವದ ಮೂಲನೆಲೆಯನ್ನಾಗಿ ಹೊಂದಿವೆ. ಇದರ ಪರಿಣಾಮವಾಗಿ ಇಂದು ನ್ಯಾಯಂಗವೂ ಒಳಗೊಂಡು ಶಾಸಕಾಂಗ ಮತ್ತು ಕಾರ್ಯಾಂಗಗಳು ಭ್ರಷ್ಟತೆಯ ಭದ್ರ ಬೇರುಗಳನ್ನು ತಮ್ಮಲ್ಲಿ ಅಡಕಗೊಳಿಸಿಕೊಂಡಿವೆ
ಪ್ರಸ್ತುತ ಕೇಂದ್ರದಲ್ಲಿ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಭ್ರಷ್ಟಾಚಾರ ಮತ್ತು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣದ ವಿರುದ್ಧ ನಡೆದಿರುವ ಹೋರಾಟವನ್ನು ಹೇಗಾದರೂ ಮಾಡಿ ಮಣಿಸಲು ಪ್ರಯತ್ನಿಸುತ್ತಿದೆ. ಇದರಿಂದ ತನ್ನ ಪಕ್ಷದ ಹಿಂದಿನ ಮತ್ತು ಇಂದಿನ ಹಿರಿಯ ನಾಯಕರ ಬಣ್ಣ ಬಯಲಾಗುವ ಭಯ ಅದಕ್ಕಿದೆ ಹಾಗಾಗಿ ಯುಪಿಎ ಸರಕಾರದ ಮಿತ್ರ ಪಕ್ಷಗಳು ಇದುವರೆಗೂ ಅನುಸರಿಸಿಕೊಂಡು ಬಂದಿರುವ ಪಕ್ಷ ಮತ್ತು ಅಧಿಕಾರ ರಾಜಕಾರಣದ ಹೆದ್ದಾರಿಯನ್ನು ಬಿಟ್ಟು ಅನ್ಯಮಾರ್ಗ ಹಿಡಿಯಲು ಕಾರಣವಿಲ್ಲ. ದೇಶದ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಯೇ ದೇಶದ ಹಿತಾಸಕ್ತಿಯೆಂದು ನಂಬಿರುವುದರಿಂದ ಈಗ ದೇಶದ ನಿಜವಾದ ಹಿತಾಸಕ್ತಿ ಅಮುಖ್ಯವಾಗಿದೆ. ಈ ಹೋರಾಟದ ನೇತೃತ್ವ ವಹಿಸಿರುವ ನಾಯಕರು ದುರ್ಬಲರೂ ದಾರಿತಪ್ಪಿದವರೂ ಆಗಿರುವುದರಿಂದ ಇದೊಂದು ಹುಸಿ ಹೋರಾಟವಾಗಿಯೆ ಕಂಡುಬರುತ್ತಿದೆ. ಇದನ್ನು ನಯವಾಗಿಯೆ ದಮನ ಮಾಡಲು ಯುಪಿಎ ಸರಕಾರ ಸಕಲ ಪ್ರಯತ್ನವನ್ನೂ ಮಾಡುತ್ತಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ